ಸೋಮವಾರ, ಸೆಪ್ಟೆಂಬರ್ 26, 2011

As every cat owner knows, nobody owns a cat.....!

ಸಿನಿಮಾ ನಿರ್ದೇಶಕ, ಬರಹಗಾರ 'ಎಲ್ಲೆನ್ ಪೆರಿ ಬರ್ಕ್ಲಿ'ಯ ಪ್ರಸಿದ್ಧ ಸಾಲುಗಳಿವು. ಬೆಕ್ಕನ್ನು ಕಂಡಾಗಲೆಲ್ಲಾ ನನಗೆ ಎಲ್ಲೋ ಓದಿದ ಈ ಸಾಲುಗಳು ನೆನಪಾಗುತ್ತವೆ. ನಿಯತ್ತಿನಲ್ಲಿ ಮನುಷ್ಯನ ಹೊರತು ಯಾವ ಪ್ರಾಣಿಯ ಸಮಕ್ಕೆ ಬರದಿದ್ದರೂ, ಬೆಕ್ಕು ಬಹಳ ಜನರ ಪ್ರೀತಿ ಪಾತ್ರ ಜಂತು! ಸಟಕ್ಕನೆ ಎತ್ತಿ ಮುದ್ದಾಡಬೇಕೆನಿಸುವ ಬೆಕ್ಕಿನ ಮರಿ ಹೀಗೆ ಅನಾಮತ್ತಾಗಿ ನನ್ನ ಕ್ಯಾಮರಾಕ್ಕೆ ಸಿಕ್ಕಿದ್ದು ದೆಹಲಿಯಲ್ಲಿ. 

ಶುಕ್ರವಾರ, ಸೆಪ್ಟೆಂಬರ್ 23, 2011

ಅಲೆಲೆಲೇ ಗಿಣಿರಾಮ....!


ಕಳೆದ ವಾರವಿಡೀ ದೆಹಲಿ ಪ್ರವಾಸದಲ್ಲಿದ್ದೆ. ಪ್ರಸಿದ್ಧ ಕುತುಬ್ ಮಿನಾರ್ ಬಳಿ ಸಿಕ್ಕ ಈ ಫೋಟೋ ಪ್ರವಾಸದ ಖುಷಿ ಹೆಚ್ಚಿಸಿತು.


ಹಾಂ... ಅಂದ ಹಾಗೆ ಇದು 'ಬಣ್ಣದ ಕಣ್ಣ' ಮೊದಲ ನೋಟ. ನಿಮ್ಮ ಪ್ರತಿಕ್ರಿಯೆ ಅವಶ್ಯ ಇರಲಿ... :)